ಚಿತ್ರ: ಅನ್ನಪೂರ್ಣ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು:ಪಿ.ಬಿ.ಶ್ರೀನಿವಾಸ್

ಹೃದಯವೀಣೆ ಮಿಡಿಯೆ ತಾನೆ 
ಕಾರಣ ನೀನೆ ಓ ಜಾಣೆ ಕಾರಣ ನೀನೆ ಓ ಜಾಣೇ    ||ಪಲ್ಲವಿ||

ಬಿದುರಿನ ಕೊಳಲು ಗಾನದ ಹೊನಲು 
ಹರಿಸದೇ ಕೃಷ್ಣನ ಕರ ಸೋಕಲೂ ||2||
ಚಂದ್ರನ ಕಾಣಲು ಮೊರೆಯದೇ ಕಡಲೂ
ತಿಂಗಳ ಬೆಳಕಿನ ರಾತ್ರಿಯೊಳೂ    ||ಹೃದಯವೀಣೆ||

ಚೈತ್ರ ಮಾಸದೊಳು ಮಾವು  ಚಿಗುರಲು
ಕೋಗಿಲೆ ಹಾಡದೆ ಹರುಷದೊಳು ||2||
ಹೂವು ಅರಳಲೂ ಕಂಪು ಚೆಲ್ಲಲು
ದುಂಬಿ ನಲಿಯದೆ ಗಾನದೋಳೂ    ||ಹೃದಯವೀಣೆ||

category: ಕನ್ನಡ ಚಿತ್ರಸಾಹಿತ್ಯ
category: ಅನ್ನಪೂರ್ಣ ಚಿತ್ರ
category: ಚಿ.ಉದಯಶಂಕರ್ ಸಾಹಿತ್ಯ
category: ಪಿ.ಬಿ.ಶ್ರೀನಿವಾಸ್ ಗಾಯನ